ಗೆಳೆಯರೇ
ಕನ್ನಡ ರಾಜ್ಯೋತ್ಸವ 2011 ರಂದು
ಕನ್ನಡ ನಾಡಿನ ವಾಹಿನಿಯೊಂದು ಇದೇ ಮೊದಲಬಾರಿಗೆ ಸಂಪೂರ್ಣ ಕನ್ನಡಮಯವಾದ ಕಾರ್ಯಕ್ರಮಗಳನ್ನು ಕೊಡಲು ನಿರ್ಧರಿಸಿದೆ. ಆ ವಾಹಿನಿಯೇ ನಮ್ಮ "ನೇರ-ದಿಟ್ಟ-ನಿರಂತರ" ಸುವರ್ಣ 24*7 ವಾರ್ತಾ ವಾಹಿನಿಕರ್ನಾಟಕದಲ್ಲಿ ಎಲ್ಲಾ ವಾಹಿನಿಗಳಿಗಿಂತ ವಿಭಿನ್ನವಾಗಿ ಯೋಚಿಸಿ, ಹೊಸದಾದ ನಿರೂಪಣೆಯಿಂದ ಅಚ್ಚ ಕನ್ನಡದಲ್ಲೇ ದಿನಪೂರ್ತಿ ವಾರ್ತೆಗಳನ್ನು ಹಾಗೂ ಇನ್ನಿತರ ಕಾರ್ಯಕ್ರಮಗಳನ್ನೂ ಜೊತೆಗೆ ಕ್ರೀಡಾ ಸುದ್ದಿಯನ್ನೂ ಕನ್ನಡ ದಲ್ಲೇ ನಿರೂಪಿಸಿ, ಸೈ ಅನ್ನಿಸಿಕೊಂಡಿದ್ದಾರೆ.
ಇಂತಹ ಪ್ರಯತ್ನದಿಂದ ಕನ್ನಡದ ಪರಿಮಳ ಇನ್ನಷ್ಟು ಪಸರಿಸಲಿದೆ.
ಮರೆತು ಹೋಗುತ್ತಿರುವ ಅಥವಾ ಇಂಗ್ಲೀಷ್ ಭಾಷೆಯಲ್ಲಿ ಲೀನವಾಗುತ್ತಿರುವ
ಎಷ್ಟೋ ಕನ್ನಡ ಪದಗಳನ್ನು ಕೇಳ ಸಿಗುವಂತೆ ಮಾಡುತ್ತಿದ್ದಾರೆ.
ವಾಹಿನಿಯ ಪ್ರಧಾನ ಸಂಪಾದಕರಾದ ಸನ್ಮಾನ್ಯಶ್ರೀ ವಿಶ್ವೇಶ್ವರ ಭಟ್ ರವರ ಆಲೋಚನೆಗೆ ಕನ್ನಡಿಗರ ಪರವಾಗಿ ನನ್ನ ಅಭಿನಂದನೆಗಳು
ಹಾಗೆಯೇ ಮುಂಜಾನೆಯ ಬ್ರೇಕ್ ಫಾಸ್ಟ್ ನ್ಯೂಸ್ ನ ನಿರೂಪಕರಾದ
ಜಯಪ್ರಕಾಶ್ ಶೆಟ್ಟಿ ಹಾಗೂ ಪ್ರತಿಮಾ ಭಟ್ ರ ಅರ್ಥಪೂರ್ಣ,
ಭಾವ ಪೂರ್ಣ ನಿರೂಪಣೆಯಿಂದ ಕನ್ನಡಿಗರ ಮನಸ್ಸಿಗೆ ಹಿತ ನೀಡುತ್ತಿದ್ದಾರೆ.
ವಾಹಿನಿಯ ಸಂಪಾದಕರಾದ ಶ್ರೀ ಹಮೀದ್ ಪಾಳ್ಯ ಹಾಗೂ
ನಿರೂಪಕರಾದ ಶ್ರೀ ರಂಗನಾಥ ಭಾರಧ್ವಜ್, ರಾಧಾ ಹಿರೇಗೌಡರ್, ಶ್ವೇತಾ, ಭಾವನ,, ಭವ್ಯ, ಗುರುಪ್ರಸಾದ್ (ಫೋಟೋ ಸಿಗಲಿಲ್ಲ)
ಇವರುಗಳಿಗೆ ಹಾಗೂ ವಾಹಿನಿ ತಾಂತ್ರಿಕ ವರ್ಗದವರಿಗೂ, ಹೃತ್ಪೂರ್ವಕವಾದ ಅಭಿನಂದನೆಗಳು.
ಆರಂಭದಲ್ಲಿ ಸಣ್ಣಪುಟ್ಟ ತಪ್ಪುಗಳು ಆಗುತ್ತಿರುತ್ತವೆ. ದಿನ ಕಳೆದಂತೆಲ್ಲಾ ರೂಢಿಯಾಗುತ್ತಾ ಹೋಗುತ್ತೆ.
ಪ್ರಯತ್ನ ಮುಖ್ಯವಾಗುತ್ತೆ. ಎಲ್ಲಾ ಕಾರ್ಯಕ್ರಮಗಳನ್ನು ನಕಲು, ಅನುಕರಣೆ ಮಾಡುವ ಬೇರೆ ವಾಹಿನಿಗಳೂ ಸಹ ಇವರನ್ನು ಅನುಕರಣೆ ಮಾಡುತ್ತಾರೋ, ಕನ್ನಡದ ಅಭಿಮಾನದಿಂದ ತಾವೇ ಸಂಪೂರ್ಣ ಕನ್ನಡವನ್ನು ಬಳಸುತ್ತಾರೋ ನೋಡಬೇಕು.
ಎಲ್ಲರೂ ಕನ್ನಡ ವನ್ನು ಬಳಸಿದರೆ ಕನ್ನಡವನ್ನು ಬೆಳೆಸಿದಂತೆ ಆಗುತ್ತದೆ,
ಏನೇ ಆದರೂ ಸಂಪೂರ್ಣ ಕನ್ನಡಮಯ ವಾಹಿನಿಯನ್ನಾಗಿ ಮಾಡ ಹೊರಟಿರುವ "ಸುವರ್ಣ 24*7 ವಾರ್ತಾ ವಾಹಿನಿ" ಗೆ ಒಳ್ಳೇಯದಾಗಲಿ, ಯಶಸ್ಸು ಸದಾ ಹೀಗೇ ಇರಲಿ ಎಂದು ಹಾರೈಸುತ್ತೇನೆ.
ರಾಜು ವಿನಯ್ ದಾವಣಗೆರೆ










ತುಂಬಾ ಧನ್ಯವಾದಗಳು..!*!
ReplyDelete.............ಒಳ್ಳೇಯದಾಗಲಿ
Adare Enu madodu.. ella progras name English nalle ideyalla...
ReplyDelete